top of page
White Structure

Dhyana Kasturi Subscription

ನಿಯಮಗಳು ಮತ್ತು ಷರತ್ತುಗಳು (Terms and Conditions)


'ಧ್ಯಾನ ಕಸ್ತೂರಿ' ವೆಬ್‌ಸೈಟ್‌ಗೆ ಸುಸ್ವಾಗತ. ನಮ್ಮ ನಿಯತಕಾಲಿಕೆಗೆ ಚಂದಾದಾರರಾಗುವ ಮುನ್ನ ಅಥವಾ ವೆಬ್‌ಸೈಟ್ ಬಳಸುವ ಮುನ್ನ ಈ ಕೆಳಗಿನ ನಿಯಮಗಳು ಮತ್ತು ಷರತ್ತುಗಳನ್ನು ಗಮನವಿಟ್ಟು ಓದಿ. ಈ ಸೇವೆಯನ್ನು ಬಳಸುವ ಮೂಲಕ ನೀವು ಈ ಕೆಳಗಿನ ಎಲ್ಲಾ ಷರತ್ತುಗಳಿಗೆ ಬದ್ಧರಾಗಿರಲು ಸಮ್ಮತಿಸುತ್ತೀರಿ.

೧. ಚಂದಾದಾರಿಕೆ ಮತ್ತು ಸಕ್ರಿಯಗೊಳಿಸುವಿಕೆ
ಪಾವತಿ ಯಶಸ್ವಿಯಾಗಿ ದೃಢಪಟ್ಟ ನಂತರ ನಿಮ್ಮ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗುತ್ತದೆ.

ಒಂದು ವೇಳೆ ನೀವು ತಿಂಗಳ ೨ ನೇ ತಾರೀಕಿನ ನಂತರ ಸಬ್ಸ್ಕ್ರೈಬ್ ಆಗಿದ್ದಲ್ಲಿ, ನಿಮ್ಮ ಚಂದಾದಾರಿಕೆಯನ್ನು ಮುಂದಿನ ತಿಂಗಳಿಂದ ಪರಿಗಣಿಸಿ ಜಾರಿಗೊಳಿಸಲಾಗುವುದು.

೨. ಪಾವತಿ ವಿಧಾನಗಳು (Payment Options)
ಈ ವೆಬ್‌ಸೈಟ್‌ನಲ್ಲಿ ಎರಡು ವಿಧದ ಪಾವತಿ ವಿಧಾನಗಳು ಲಭ್ಯವಿರುತ್ತವೆ:

ವಾಟ್ಸಾಪ್ ಮುಖಾಂತರ: ನೀವು ವಾಟ್ಸಾಪ್ ಮೂಲಕ ಸಬ್ಸ್ಕ್ರೈಬ್ ಆಗಲು ಬಯಸಿದರೆ, ನಿಮಗೆ ಪಿಎಂಸಿ ಕನ್ನಡದ (PMC Kannada) ಅಧಿಕೃತ ಕ್ಯೂಆರ್ ಕೋಡ್ (QR Code) ಕಳುಹಿಸಲಾಗುತ್ತದೆ. ಪಾವತಿ ಮಾಡಿದ ನಂತರ ಅದರ ಸ್ಕ್ರೀನ್‌ಶಾಟ್ ಅನ್ನು ಮರಳಿ ಅದೇ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು.

ಆನ್‌ಲೈನ್ ಪಾವತಿ: ವೆಬ್‌ಸೈಟ್‌ನಲ್ಲಿರುವ 'Pay Now' ಬಟನ್ ಮೇಲೆ ಕ್ಲಿಕ್ ಮಾಡಿ ಆನ್‌ಲೈನ್ ಮೂಲಕ ನೇರವಾಗಿ ಪಾವತಿ ಮಾಡಬಹುದು. ಪಾವತಿ ಪೂರ್ಣಗೊಂಡ ಕೂಡಲೇ ನಿಮ್ಮ ರಶೀದಿ (Acknowledgement) ಅಲ್ಲಿಯೇ ಲಭ್ಯವಾಗುತ್ತದೆ.

೩. ಪತ್ರಿಕೆ ವಿತರಣೆ ಮತ್ತು ರವಾನೆ (Delivery Policy)
'ಧ್ಯಾನ ಕಸ್ತೂರಿ' ಮಾಸಪತ್ರಿಕೆಯನ್ನು ಭಾರತ ಅಂಚೆ ಇಲಾಖೆ (India Post) ಅಥವಾ ಅಧಿಕೃತ ಕೊರಿಯರ್ ಸೇವೆಯ ಮೂಲಕ ನಿಮ್ಮ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಪತ್ರಿಕೆಯನ್ನು ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಪ್ರಕಟಿಸಿ ರವಾನಿಸಲು PMC Kannada ನಿರಂತರ ಪ್ರಯತ್ನಿಸುತ್ತದೆ.

ಪ್ರಕೃತಿ ವಿಕೋಪ, ಅಂಚೆ ಸೇವೆಯ ವಿಳಂಬ, ತಾಂತ್ರಿಕ ಕಾರಣಗಳು ಅಥವಾ ಇತರೆ ಅನಿವಾರ್ಯ ಸಂದರ್ಭಗಳಿಂದ ವಿತರಣೆಯಲ್ಲಿ ತುಸು ವಿಳಂಬ ಉಂಟಾಗಬಹುದು.

೪. ವಿಳಾಸದ ವಿವರಗಳು ಮತ್ತು ಜವಾಬ್ದಾರಿ
ನಿಮ್ಮ ವಿಳಾಸದಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ, ಮುಂದಿನ ಸಂಚಿಕೆ ರವಾನೆಯಾಗುವ ಕನಿಷ್ಠ ೧೫ ದಿನಗಳ ಮೊದಲು PMC Kannada ಸಂಸ್ಥೆಗೆ ತಿಳಿಸಬೇಕು.

ತಪ್ಪಾದ ಅಥವಾ ಅಪೂರ್ಣ ವಿಳಾಸ ನೀಡಿದ ಪರಿಣಾಮ ಉಂಟಾಗುವ ವಿತರಣಾ ಸಮಸ್ಯೆಗೆ ಅಥವಾ ಪತ್ರಿಕೆ ತಲುಪದಿದ್ದರೆ ಅದಕ್ಕೆ PMC Kannada ಜವಾಬ್ದಾರಿಯಾಗಿರುವುದಿಲ್ಲ.

ಯಾವುದೇ ಸಂಚಿಕೆ ಸಮಯಕ್ಕೆ ತಲುಪದಿದ್ದರೆ, ಪ್ರಕಟಣೆಯ ದಿನಾಂಕದಿಂದ ೩೦ ದಿನಗಳ ಒಳಗೆ ನಮಗೆ ತಿಳಿಸಬೇಕು.

೫. ಮರುಪಾವತಿ ಮತ್ತು ರದ್ದತಿ ನೀತಿ (Refund & Cancellation Policy)
ಒಮ್ಮೆ ಚಂದಾದಾರಿಕೆ ಸಕ್ರಿಯಗೊಂಡ ನಂತರ ಅಥವಾ ಪಾವತಿ ಮಾಡಿದ ಯಾವುದೇ ಹಣವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ (Non-refundable) ಹಾಗೂ ಅದನ್ನು ಇತರರಿಗೆ ವರ್ಗಾಯಿಸಲು ಬರುವುದಿಲ್ಲ.

ಚಂದಾದಾರಿಕೆಯನ್ನು ಮಧ್ಯದಲ್ಲಿ ರದ್ದುಪಡಿಸಿದರೂ ಸಹ, ಉಳಿದ ಅವಧಿಯ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.

೬. ಕೃತಿಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳು (Copyright)
'ಧ್ಯಾನ ಕಸ್ತೂರಿ' ಮಾಸಪತ್ರಿಕೆಯಲ್ಲಿ ಪ್ರಕಟವಾಗುವ ಎಲ್ಲಾ ಲೇಖನಗಳು, ಚಿತ್ರಗಳು, ವಿನ್ಯಾಸಗಳು ಹಾಗೂ ವಿಷಯಗಳ ಮೇಲಿನ ಸಂಪೂರ್ಣ ಹಕ್ಕು PMC Kannadaಗೆ ಸೇರಿರುತ್ತದೆ.

PMC Kannada ಸಂಸ್ಥೆಯ ಲಿಖಿತ ಅನುಮತಿಯಿಲ್ಲದೆ ಯಾವುದೇ ವಿಷಯವನ್ನು ಮರುಮುದ್ರಿಸುವುದು, ನಕಲಿಸುವುದು ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ವಿತರಿಸುವುದು ಕಟ್ಟುನಿಷೇಧed.

೭. ನಿಯಮಗಳಲ್ಲಿ ಬದಲಾವಣೆ


ಅಗತ್ಯವಿದ್ದಲ್ಲಿ ಈ ನಿಯಮಗಳು ಮತ್ತು ಷರತ್ತುಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುವ ಅಥವಾ ಬದಲಾಯಿಸುವ ಸಂಪೂರ್ಣ ಹಕ್ಕನ್ನು PMC Kannada ಕಾಯ್ದಿರಿಸಿಕೊಂಡಿರುತ್ತದೆ.

೮. ನಮ್ಮನ್ನು ಸಂಪರ್ಕಿಸಿ (Contact Us)


ಯಾವುದೇ ಸಂದೇಹಗಳಿದ್ದರೆ, ಪ್ರಶ್ನೆಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಳಾಸ ಅಥವಾ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ:

ಸಂಸ್ಥೆ: PMC Kannada – ಧ್ಯಾನ ಕಸ್ತೂರಿ ಆಧ್ಯಾತ್ಮಿಕ ಮಾಸಪತ್ರಿಕೆ

📧 ಇಮೇಲ್: pmckannada@gmail.com

📞 ಮೊಬೈಲ್: 99804 54559

PMC Kannada

4th Floor, 45/46, Puttenahalli Rd, JP Nagar 7th Phase, Bengaluru, Karnataka 560078

Shop

Be the First to Know

Sign up for our newsletter

  • Whatsapp
  • Telegram
  • YouTube
  • Facebook
  • Instagram
  • X
  • LinkedIn

© 2026 PMC Kannada. All Rights Reserved. 

bottom of page